ಪಿತೃ ಶ್ರಾದ್ಧಎಂದರೆ ಏನು? ಏಕೆಮಾಡಬೇಕು?
ಹಿರಿಯರ, ಸ್ಮರಣೆ ಶ್ರಾದ್ಧ ಮತ್ತು ಪಿತೃ ಪಕ್ಷ.
![pitru paksha shraddha kannada](https://indiapuja.in/wp-content/uploads/2024/06/pitru-paksha-final-kannada.jpg)
ಶ್ರಾದ್ಧ ಎಂದರೆ ಏನು?
ಶ್ರಾದ್ಧ ಎಂದರೆ ಒಬ್ಬ ವ್ಯಕ್ತಿ ತೀರಿಹೋದರೆ, ಆ ವ್ಯಕ್ತಿಗೆ ವರ್ಷದಲ್ಲಿ ಎರಡು ಸಲ ತೀಲ {ಕರಿಎಳ್ಳು},ಅನ್ನ, ನೀರು ಕೊಡಬೇಕಾಗುತ್ತದೆ. ಮೊದಲನೆಯದು ವ್ಯಕ್ತಿ ತೀರಿದ ದಿನದ ತಿಥಿಗೆ ಅನುಗುಣವಾಗಿ ಮಾಡುವುದೇ “ಕಾಲಶ್ರಾದ್ಧ”. ಇಲ್ಲಿ ತೀರಿಹೋದ ವ್ಯಕ್ತಿಯ ಜೊತೆ ಮೂರು ತೆಲೆಗಳ ಶ್ರದ್ಧೆಯಿಂದ ಸ್ಮರಣೆ ಮಾಡುವುದೇ “ಶ್ರಾದ್ಧ
ಶ್ರಾದ್ಧಏಕೆಮಾಡಬೇಕು?
ನಮ್ಮ ಮನೆತನದ ಹಿರಿಯರು ತೀರಿರುತ್ತಾರೆ. ಅವರಿಗೆ ಗೌರವ ಸ್ಮರಣೆ ಸೂಚಕ ಮಾಡುವುದೇ ಶ್ರಾದ್ಧ ಮತ್ತು ಪಿತೃಮಾಸ ಎಂಭತ್ತನಾಲ್ಕು ಲಕ್ಷ ಯೋನಿಯಲ್ಲಿಹುಟ್ಟುತ್ತೇವೆ. ಅದರಲ್ಲಿ ಮಾನವ ಜನ್ಮ ಶ್ರೇಷ್ಠ. ಏಕೆಂದರೆ ಅರಿವು, ಸಾಮರ್ಥ್ಯ, ಯೋಗ್ಯತೆ ಇರುವಂತಹ ಮನುಷ್ಯ ಪ್ರಾಣಿ. ಅವರ ಸ್ಮರಣೆಯಲಿ ಮಾಡುವ ಕಾರ್ಯಪುಣ್ಯದಾಯಕವಾಗಿದೆ. ಅವರಿಗೆ. ನಾವುಗಳು ತೋರುವ ಕೃತಜ್ಞತೆಯ ಭಾವನಾತ್ಮಕಕಾರ್ಯ.
ಶ್ರಾದ್ಧದ ಮಹತ್ವ
ನಾವು ಮಾಡುವ ಶ್ರಾದ್ಧ ಅವರಿಗೆ ಹೇಗೆ ತಲುಪುತ್ತದೆ ಎಂದರೆ ಇಲ್ಲಿ ಮಾಡುವ ಶ್ರಾದ್ದದಲ್ಲಿ ಕೊಡುವ ಅನ್ನ, ತರ್ಪಣ, ಮುಂತಾದವುಗಳಿಂದ, ಅವರು ಈಗಿರುವ ಜನ್ಮದಲ್ಲಿ ಅನ್ನದ ರೂಪದಲ್ಲಿ ಸಿಗುತ್ತದೆ, ಅಂದ್ರೆ ಈ ಜನ್ಮದಲ್ಲಿಪ್ರಾಣಿಯೋ ಪಕ್ಷಿಯೋ ಆಗಿ ಹುಟ್ಟಿದ್ದರೆ ಅಥವಾ ಯಾವುದೇ ರೂಪದಲ್ಲಿ ಹುಟ್ಟಿದ್ದರೆ ಅವು ತಿನ್ನುವ ಹುಲ್ಲು, ಹಣ್ಣು ಅಥವಾ ಯಾವುದೇ ಆಹಾರ ರೂಪವಾಗಿ ಆಗಿ ಪರಿವರ್ತನೆ ಆಗಿ ಅವರಿಗೆ ತಲುಪುತ್ತೆ.. ಅವರು ಪಡೆದ ಜನ್ಮ ಸುಖವಾಗಿ ಕಳೆಯುತ್ತದೆ
![Online puja Pitru paksha shraddha](https://indiapuja.in/wp-content/uploads/2024/06/banner-799-x-99-px.jpg)
ಇನ್ನು ಶ್ರಾದ್ಧದ ಹಿನ್ನಲೆ ಈ ರೀತಿ ಇರುತ್ತದೆ, { ಪುರಾಣಗಳಪ್ರಕಾರ}
ಯುದ್ಧದಲ್ಲಿ ಅರ್ಜುನ ಕೈಯಿಂದ ಕರ್ಣನ ಮೃತ್ಯುವಾದಾಗ,ಅವನ ಆತ್ಮ ಸ್ವರ್ಗಕ್ಕೆ ಹೋಗುವಾಗ ಅವನಿಗೆ ಕೇವಲ ಚಿನ್ನ , ಬೆಳ್ಳಿ ಸಿಗುತ್ತೆ ಅನ್ನ ಸಿಗುವದಿಲ್ಲ , ಆಗ ಕರ್ಣನು ನೊಂದುಕೊಂಡು ಯಮಧರ್ಮರಾಯನಿಗೆ ಕೇಳುತ್ತಾನೆ,ನಾನು ಭೂಮಿಯಲ್ಲಿದ್ದಾಗ ಬೇಕಾದಷ್ಟು ದಾನ ಧರ್ಮ ಮಾಡಿರುವೆ ನನಗೇಕೆ ಈ ಗತಿ ಎಂದು ಕೇಳಿದಾಗ , ಆಗ ಯಮಧರ್ಮರಾಯ ಹೇಳುತ್ತಾನೆ ,ನೀನು ಎಲ್ಲವನ್ನು ದಾನ ಮಾಡಿದ್ದಿಯಾ; ಆದರೆ ಅನ್ನದಾನ ಮತ್ತು ಪಿತೃ ಕರ್ಮ ಮಾಡಲಾರದಕ್ಕೆ ಈ ಸ್ಥಿತಿ ನಿನಗೆ ಬಂದಿದೆ ಎಂದು ಹೇಳುತ್ತಾನೆ .
ಇದಕ್ಕೆ ಪರಿಹಾರ ಅಂದಾಗ , ನಿನಗೆ ಭಾದ್ರಪದ ಹುಣ್ಣಿಮೆಯಿಂದ ಅಮಾವಾಸ್ಯೆವರೆಗೆ {ಮಹಾಲಯ ಅಮಾವಾಸ್ಯೆ} ಸಮಯ ಕೊಡುತ್ತೇನೆ , ಅಷ್ಟರಲ್ಲಿ ನೀನು ಅನ್ನದಾನ , ವಸ್ತ್ರದಾನ ಮಾಡಿ ಮತ್ತು ಪಿತೃ ತರ್ಪಣ ಕೊಟ್ಟು ಬಾ ಆಗ ನಿನಗೆ ಸ್ವರ್ಗದಲ್ಲಿ ಅನ್ನ ಸಿಗುತ್ತೆ ಎಂದು ಹೇಳುತ್ತಾನೆ . ಅದೇ ರೀತಿ ಕರ್ಣನು ಈ ಹದಿನೈದು ದಿನಗಳಲ್ಲಿ, ಎಲ್ಲ ಕಾರ್ಯಮಾಡಿ ಸ್ವರ್ಗಕ್ಕೆ ಹೋದಾಗ ಅಲ್ಲಿ ಅನ್ನಸಿಗುತ್ತದೆ.
ಪಕ್ಷ ಮಾಸ{ಪಿತೃ ಮಾಸ}
ಭಾದ್ರಪದ ಕೃಷ್ಣ ಪಕ್ಷ ಪಾಡ್ಯಮಿಯಿಂದ ಆಶ್ವಯುಜ ಶುಕ್ಲ ಪಾಡ್ಯಮಿಯವರೆಗೆ 16 ದಿನಗಳು ಮಹಾಲಯತಿಥಿಗಳು.
ರವಿ ಕನ್ಯಾರಾಶಿಯನ್ನು ಪ್ರವೇಶಿಸಿ ವೃಶ್ಚಿಕ ರಾಶಿಯ ಪ್ರವೇಶದವರೆಗಿನ ಈ ಕಾಲದಲ್ಲಿ ಪಿತೃಲೋಕವು ಭೂಮಿಗೆ ಅತ್ಯಂತ ಸಮೀಪ ಬಂದಿರುತ್ತದೆ. ಈ ದೃಷ್ಟಿಯಿಂದ ಭಾದ್ರಪದದ ಅಪರ ಪಕ್ಷ ಎಂದರೆ ಕೃಷ್ಣ ಪಕ್ಷದ ಹದಿನೈದು ದಿನಗಳುಮಹಾಲಯ ಎಂದು ಕರೆಸಿಕೊಳ್ಳುತ್ತದೆ. ಇನ್ನು ಎರಡನೇಯದು ಭಾದ್ರಪದ ಮಾಸದಲ್ಲಿ ಬರುವ “ಪಕ್ಷಮಾಸ”.ಇಲ್ಲಿ ತೀರಿಹೋದ ವ್ಯಕ್ತಿಯ ಜೊತೆ ಎಲ್ಲ ತಲೆಮಾರಿ ಕುಲ ಬಾಂಧವರ ಸ್ಮರಣೆ ಹಾಗೂ ಸರ್ವ ಪಿತೃಗಳ ಸ್ಮರಣೆ ಮಾಡಿ ತೀಲೋದಕ ಬೀಡುವುದೇ ಇದರ ಪ್ರಾಮುಖ್ಯತೆ.
ಈ ನೈಮಿತ್ತಿಕ ಶ್ರಾಧ್ದದಲ್ಲಿ ಬರುವ ಪಕ್ಷಮಾಸದಲ್ಲಿ ಮಾಡುವ ಶ್ರಾಧ್ದವೆ “ಪಿತೃ ಪಕ್ಷ ” ಅನ್ನುತ್ತಾರೆ . ಇಲ್ಲಿ ಸರ್ವ ಪಿತೃಗಳನ್ನು ಸ್ಮರಿಸಿ ತರ್ಪಣ ಬಿಡುತ್ತಾರೆ . ಇದರ ದೇವತೆ ಧೂರಿ ಮತ್ತು ವಿಲೋಚನ. ಇಲ್ಲಿ ಮೂರು ತಲೆಮಾರಿನ ಪಿತೃಗಳ ಸ್ಮರಣೆ ಮಾಡಿ, ಸಾಮುಹಿಕವಾಗಿ ತಿಲ ,ಜಲ, ತರ್ಪಣ , ಪಿಂಡ ಬಿಡುವುದೇ ಪಿತೃ ಪಕ್ಷ ಅಥವಾ ಮಹಾಲಯ ಪಕ್ಷ ಎನ್ನುತ್ತಾರೆ . ಈ ಮೂರು ತಲೆಮಾರಿನವರು ಆತ್ಮಗಳು ಇದು ಸೂಕ್ಷ್ಮ ಶರೀರ ಇರುವದರಿಂದ ಭೂಮಿ ಮತ್ತು ಸ್ವರ್ಗ ದ ಮಧ್ಯದಲ್ಲಿ ಇರುತ್ತಾರೆ, ಈ ಶ್ರಾದ್ಧ ಕಾಲದಲ್ಲಿ ಜನಾರ್ಧನ ರೂಪಿಯಾದ ಪರಮಾತ್ಮನು 3555 ರೂಪಗಳಲ್ಲಿ ಇರುತ್ತಾನೆ.
ಪರಮಾತ್ಮನ ಪಂಚ ರೂಪಗಳು
ಪರಮಾತ್ಮನ ಪಂಚ ರೂಪಗಳಾದ ಅನಿರುಧ್ದ , ಪ್ರದ್ಯುಮ್ನ , ಸಂಕರ್ಷಣ , ವಾಸುದೇವ , ನಾರಾಯಣ ಹೀಗೆ ಐದು ರೂಪಗಳಲ್ಲಿ ಇರುತ್ತಾನೆ .
ಇನ್ನು ಜಗನ್ನಾಥ ದಾಸರು ಹರಿಕಥಾಮೃತಸಾರ “ಭೋಜನ ಸಂಧಿಯಲ್ಲಿನ 21 ನೇ ನುಡಿಯಲ್ಲಿ ಹೇಳಿರುವಂತೆ ಶ್ರಾಧ್ದಗತ ಭಗವದ್ರೂಪಗಳಲ್ಲಿ “ಅನಿರುಧ್ದ ರೂಪಿಯಾದ ಪರಮಾತ್ಮನು ತ್ರಿನವತಿ {93- } ರೂಪಗಳಿಂದ {ವಸುಗಳು – 08 ರೂಪಗಳು, ರುದ್ರರಲ್ಲಿ – 11ರೂಪಗಳು,, ಆದಿತ್ಯರಲ್ಲಿ – 12 ರೂಪ ಗಳು ಹೀಗೆ ಕೂಡಿಸಿ ಒಟ್ಟಾರೆ 31 ರೂಪಗಳನ್ನು} ಆಗುತ್ತದೆ .
ಅನಿರುಧ್ದ ,ಪ್ರದ್ಯುಮ್ನ ಸಂಕರ್ಷಣ ಎಂಬ 3 ನಾಮಗಳಿಂದ ಗುಣಿಸಿದಾಗ 93 ರೂಪಗಳು ಆಗುತ್ತದೆ. ಇದಕ್ಕೆ ತ್ರಿನವತಿ ರೂಪ ಎನ್ನುವರು.
ಸಂಸ್ಕೃತದಲ್ಲಿ ತ್ರಿನವತಿ ಎಂದರೆ 93ಎಂದರ್ಥ, ಶ್ರಾಧ್ದ ಮಾಡುವ ಯಜಮಾನನಲ್ಲಿ ಈವಸು, ಆದಿತ್ಯ, ರುದ್ರರ ಮೂಲಕ ಪಿತೃಗಳಿಗೆ ಪ್ರದ್ಯುಮ್ನ ರೂಪದಿಂದ ಅನ್ನನಾಗಿರುತ್ತಾನೆ. ಸಂಕರ್ಷಣ ರೂಪದಿಂದ ದೇವಭಾಗ ಮತ್ತು ಪಿತೃಭಾಗ ಎಂದು ವಿಭಾಗ ಮಾಡುತ್ತಾನೆ, ನಿತ್ಯಾನಂದನಾದ ಭಗವಂತನು ತುರ್ಯ ನಾಮಕನಾಗಿ ವಾಸುದೇವನ ಮೂಲಕ ತಾನು ಉಂಡು ,ಸಕಲರಿಗೂ ಉಣಿಸುವನು.
ಭಗವಂತನ ಷಣ್ಣವತಿ{96}ರೂಪಗಳು
ಇನ್ನು ಭೋಜನ ಸಂಧಿಯ 22 ನೇ ನುಡಿಯಲ್ಲಿ ಹೇಳಿರುವ ಪ್ರಕಾರ “ಷಣ್ಣವತಿ ” ನಾಮಕನಾಗಿ ವಸು , ಮುಕ್ಕಣ್ಣ{ರುದ್ರ} ಭಾಸ್ಕರಲ್ಲಿ ನಿಂತು ತನಗೆ ಶರಣು ಬಂದವರ ಜನರನ್ನು ನಿತ್ಯದಲ್ಲಿ ಕಾಪಾಡ್ತಾ , ಅವರ ಪುಣ್ಯ ಕರ್ಮ ಸ್ವೀಕರಿಸಿ ಪಿತೃಗಳಿಗೆ ಸುಖವ ನೀಡುತ್ತಾನೆ.
ವಸುಗಳು 8 , ಏಕಾದಶ ರುದ್ರರು 11,ದ್ವಾದಶ ಆದಿತ್ಯರು 12 , ಹಾಗೆಯೇ ಒಟ್ಟಾರೆಯಾಗಿ ಕೂಡಿಸಿದಾಗ 31ರೂಪಗಳನ್ನು , ವೈಕಾರಿಕ , ತೈಜಸ , ತಾಮಸ , ಎಂಬ ಗುಣಗಳಿಂದ ಗುಣಿಸಿದಾಗ 93 ಬರುತ್ತದೆ. ಮತ್ತೆ ಈ ಮೇಲಿನ 3 ಗುಣಗಳು ಕೂಡಿಸಿದಾಗ ಷಣ್ಣವತಿ{96} ಆಗುತ್ತದೆ, ಹೀಗೆ ಭಗವಂತನನ್ನು ಚಿಂತಿಸಬೇಕು.
ಸಪ್ತಾನ್ನಗಳು
7 ತರಹದ ಅನ್ನ. ಮನಸ್ಸು,ವಾಕ್,ಪ್ರಾಣ, ಅನ್ನ ಬಲಿ , ಹೋಮ,ಹಾಲು. ಇವೆ ಸಪ್ತಾನ್ನಗಳು.
01 ಸ್ವಾಹಾ ಮಾಯಾಪತಿ, ವಾಸುದೇವ ಅನ್ನ ಕಲ್ಪಿಸಿ ದೇವತೆಗಳಿಗೆ ಬಡಿಸುವನು.
02 ಸ್ವಾಧ್ಧಾ ಜಯಾಪತಿ ಸಂಕರುಷಣ ಅನ್ನ ಕಲ್ಪಿಸಿ ಪಿತೃಗಳಿಗೆ ತೃಪ್ತಿ ಪಡಿಸುತ್ತಾನೆ.
03 ಕೃತಿ ಪತಿ ಪ್ರದ್ಯುಮ್ನ ಚತುರ್ವಿಧ ರಸಗಳಲ್ಲಿ ಅನ್ನ ಕಲ್ಪಿಸಿ ಮನುಷ್ಯರಿಗೆ ತೃಪ್ತಿ ಪಡಿಸುವನು.
04 ಶಾಂತಿ ಪತಿ ಅನಿರುಧ್ದನು ಅನ್ನ ಕಲ್ಪಿಸಿ ಪಶುಗಳಿಗೆ ತೃಪ್ತಿ ಪಡಿಸುವನು.
05 ಮಾಯಾಪತಿ ವಾಸುದೇವನಿಂದ ಈ ಸಪ್ತಾನ್ನಗಳ ಮೂಲಕ ತಾನು ಉಂಡು ಸಕಲರಿಗೂ ಉಣಿಸುವನು.
ಪಿತೃ ಪಕ್ಷ ನವಮಿ ತಿಥಿ ಶ್ರಾದ್ಧ ಮಹತ್ವ
ಮುತೈದೆ ತೀರಿ ಹೋದಲ್ಲಿ ನವಮಿ ತಿಥಿಯಂದು ಅವಿಧವಾ ನವಮಿ ಶ್ರಾದ್ಧ. ಈ ದಿನವನ್ನು ತಮ್ಮ ಗಂಡನ ಮರಣದ ಮೊದಲು ನಿಧನರಾದ ವಿವಾಹಿತ ಮಹಿಳೆಯರಿಗೆ ಸಮರ್ಪಿಸಲಾಗಿದೆ.
ದ್ವಾದಶಿ ತಿಥಿ ಶ್ರಾದ್ಧ ಮಹತ್ವ ಪಿತೃ ಪಕ್ಷ
ದ್ವಾದಶಿ ಶ್ರಾದ್ಧ: ಈ ದ್ವಾದಶಿ ಶ್ರಾದ್ಧ, ಸನ್ಯಾಸಿಗಳ ಸಲುವಾಗಿ.
ಪಿತೃ ಪಕ್ಷ ಚತುರ್ದಶಿ ತಿಥಿ ಶ್ರಾದ್ಧ
ಅಪಘಾತಗಳಲ್ಲಿ ತೀರಿ ಹೋದವರಿಗೆ ಮತ್ತು ಅಸಹಜ ಸಾವಿಗೆ ಚತುರ್ದಶಿ ತಿಥಿಯಲ್ಲಿ ,ಘಾತ ಚತುರ್ದಶಿ ತರ್ಪಣ ನೀಡಬೇಕಾಗುತ್ತದೆ.
ಪಿತೃ ಪಕ್ಷ 2024 ರ ದಿನ ನಿತ್ಯದ ತಿಥಿಗಳ ವಿವರ
ಸೆಪ್ಟೆಂಬರ್ 17, 2024 – ಮಂಗಳವಾರ, ಭಾದ್ರಪದ, ಶುಕ್ಲ ಪೂರ್ಣಿಮಾ (ಪೂರ್ಣಿಮಾ ಶ್ರಾದ್ಧ)
ಸೆಪ್ಟೆಂಬರ್ 18, 2024 – ಬುಧವಾರ, ಭಾದ್ರಪದ ಕೃಷ್ಣ ಪ್ರತಿಪದ (ಪ್ರತಿಪದ ಶ್ರಾದ್ಧ)
ಸೆಪ್ಟೆಂಬರ್ 19, 2024 – ಗುರುವಾರ, ಭಾದ್ರಪದ, ಕೃಷ್ಣ ದ್ವಿತೀಯ (ದ್ವಿತೀಯ ಶ್ರಾದ್ಧ)
ಸೆಪ್ಟೆಂಬರ್ 20, 2024 – ಶುಕ್ರವಾರ, ಭಾದ್ರಪದ, ಕೃಷ್ಣ ತೃತೀಯಾ (ತೃತೀಯಾ ಶ್ರಾದ್ಧ)
ಸೆಪ್ಟೆಂಬರ್ 21, 2024 – ಶನಿವಾರ, ಭಾದ್ರಪದ, ಕೃಷ್ಣ ಚತುರ್ಥಿ (ಚತುರ್ಥಿ ಶ್ರಾದ್ಧ)
ಸೆಪ್ಟೆಂಬರ್ 22, 2024 – ಭಾನುವಾರ, ಭಾದ್ರಪದ, ಕೃಷ್ಣ ಪಂಚಮಿ (ಪಂಚಮಿ ಶ್ರಾದ್ಧ)
ಸೆಪ್ಟೆಂಬರ್ 23, 2024 – ಸೋಮವಾರ, ಭಾದ್ರಪದ, ಕೃಷ್ಣ ಷಷ್ಠಿ (ಷಷ್ಠಿ ಶ್ರಾದ್ಧ)
ಸೆಪ್ಟೆಂಬರ್ 24, 2024 – ಮಂಗಳವಾರ, ಭಾದ್ರಪದ, ಕೃಷ್ಣ ಸಪ್ತಮಿ (ಸಪ್ತಮಿ ಶ್ರಾದ್ಧ)
ಸೆಪ್ಟೆಂಬರ್ 25, 2024 – ಬುಧವಾರ, ಭಾದ್ರಪದ, ಕೃಷ್ಣ ಅಷ್ಟಮಿ (ಅಷ್ಟಮಿ ಶ್ರಾದ್ಧ)
ಸೆಪ್ಟೆಂಬರ್ 26, 2024 – ಗುರುವಾರ, ಭಾದ್ರಪದ, ಕೃಷ್ಣ ನವಮಿ (ನವಮಿ ಶ್ರಾದ್ಧ)
ಸೆಪ್ಟೆಂಬರ್ 27, 2024 – ಶುಕ್ರವಾರ, ಭಾದ್ರಪದ, ಕೃಷ್ಣ ದಶಮಿ (ದಶಮಿ ಶ್ರಾದ್ಧ)
ಸೆಪ್ಟೆಂಬರ್ 28, 2024 – ಶನಿವಾರ, ಭಾದ್ರಪದ, ಕೃಷ್ಣ ಏಕಾದಶಿ (ಏಕಾದಶಿ ಶ್ರಾದ್ಧ)
ಸೆಪ್ಟೆಂಬರ್ 29, 2024 – ಭಾನುವಾರ, ಭಾದ್ರಪದ, ಕೃಷ್ಣ ದ್ವಾದಶಿ (ದ್ವಾದಶಿ ಶ್ರಾದ್ಧ)
ಸೆಪ್ಟೆಂಬರ್ 30, 2024 – ಸೋಮವಾರ, ಭಾದ್ರಪದ, ಕೃಷ್ಣ ತ್ರಯೋದಶಿ (ತ್ರಯೋದಶಿ ಶ್ರಾದ್ಧ)
ಅಕ್ಟೋಬರ್ 1, 2024 – ಮಂಗಳವಾರ, ಭಾದ್ರಪದ, ಕೃಷ್ಣ ಚತುರ್ದಶಿ (ಚತುರ್ದಶಿ ಶ್ರಾದ್ಧ)
ಅಕ್ಟೋಬರ್ 2, 2024 – ಬುಧವಾರ, ಭಾದ್ರಪದ, ಕೃಷ್ಣ ಅಮವಾಸ್ಯೆ (ಸರ್ವ ಪಿತೃ ಅಮವಾಸ್ಯೆ)
2ನೇ ಅಕ್ಟೋಬರ್ 2024 ಬುಧವಾರದಂದು ಮಹಾಲಯ ಅಮಾವಾಸ್ಯೆ ಅಥವಾ ಸರ್ವ ಪಿತೃ ಪಿಂಡ ಪ್ರಧಾನ ದಿನ
ವೆಚ್ಚ ಮತ್ತು ವಿವಿಧ ಪ್ಯಾಕೇಜುಗಳು
1 ತರ್ಪಣ ಮತ್ತು ಪಿಂಡ ಪ್ರಧಾನ
INR 5000
2 ತ್ರಿಪಿಂಡಿ ಶ್ರಾದ್ಧ
INR 8000
3 ನಾರಾಯಣ ಬಲಿ ಪೂಜೆ
INR 12000
4 ನಾರಾಯಣ ಬಲಿ ಮತ್ತು ತ್ರಿಪಿಂಡಿ ಶ್ರದ್ಧ್
INR 15000
ವಿಶೇಷ ಟಿಪ್ಪಣಿ:
ಪ್ಯಾಕೇಜ್ ಒಂದನ್ನು ಹೊರತುಪಡಿಸಿ ಇತರ ಎಲ್ಲಾ ಪ್ಯಾಕೇಜ್ಗಳಲ್ಲಿ ಸಾತ್ವಿಕ ಆಹಾರ ಮತ್ತು 2-4 ವ್ಯಕ್ತಿಗಳಿಗೆ ವಸತಿ ಲಭ್ಯವಿದೆ.
ವಿವರಗಳಿಗಾಗಿ ಸಂಪರ್ಕಿಸಿ:
ಗೋಕರ್ಣ, ಕರ್ನಾಟಕ
ಪಿನ್ ಕೋಡ್: 581326
ಇ-ಮೇಲ್: booking@indiapuja.in
Mobile: 9663645980